Wednesday, October 8, 2008

[Favorite songs] ತೇರಾ ಏರಿ ಅಂಬರದಾಗೆ...

After long I found this song on Youtube... also somebody has written the entire lyrics in the comments..so thot i will just copy paste this song...

http://www.youtube.com/watch?v=W_DMD0LzVGY

ಸಾಹಿತ್ಯ: ದೊಡ್ಡ ರಂಗೇಗೌಡ
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ

ತೇರಾ ಏರಿ ಅಂಬರದಾಗೆ ನೇಸರು ನಗುತಾನೆ..
ಮರಗಿಡ ತೂಗ್ಯಾವೆ...
ಹಕ್ಕಿ ಹಾಡ್ಯಾವೇ...
ಬೀರ್ಯಾವೇ, ಚೆಲುವಾ ಬೀರ್ಯಾವೇ
ಬಾ, ನೋಡಿ ನಲಿಯೋಣ ತಮ್ಮಾ
ನಾವ್, ಹಾಡಿ ಕುಣಿಯೋಣ ತಮ್ಮಾ

ಬೇಲಿ ಮ್ಯಾಗೆ ಬಣ್ಣ ಬಣ್ಣದ
ಹೂವು ಅರಳ್ಯಾವೆ
ಹೂವ ಮೇಲೆ ತುಂಬಾ ಸಣ್ಣ ಚಿಟ್ಟೆ ಕುಳಿತ್ಯಾವೆ
ಬಾಗಿ ಬಾಗಿ ಅತ್ತ ಇತ್ತ ಬಾಳೆ ಬಳುಕ್ಯಾವೆ
ಬಾಳೇ ವನವೇ ನಕ್ಕು ಕಣ್ಣು ತಂದ್ಯಾವೆ
||ಕುಂತರೆ ಸೆಳೆವ, ಸಂತಸ ತರುವ||
ಹೊಂಗೆ ತೊಂಗೆ ತೂಗಿ ತೂಗಿ
ಗಾಳಿ ಬೀಸ್ಯಾವೇ
ತೇರಾ ಏರಿ ಅಂಬರದಾಗೆ ನೇಸರು ನಗುತಾನೆ..
ಮರಗಿಡ ಕೂಗ್ಯಾವೇ...
ಹಕ್ಕಿ ಹಾಡ್ಯಾವೇ...
ಮರಗಿಡ ಕೂಗ್ಯಾವೇ...
ಚಿಲಿಪಿಲಿ ಹಕ್ಕಿ ಹಾಡ್ಯಾವೇ...

ಭೂಮಿ ಮೇಲೆ ಹಚ್ಚ ಹಚ್ಚಗೆ ಹಾದಿ ತೆಗೆದಾವೆ
ಹಾದಿ ಅಕ್ಕ ಪಕ್ಕ ಬಳ್ಳಿ ಬೆಳಿದ್ಯಾವೆ
ಸಾಲು ಸಾಲು ಬೆಟ್ಟ ಗುಡ್ಡ ಮೌನ ತಳೆದಾವೆ
ಮೌನವ ಗಾನ ಎಲ್ಲರ ಮನಸಾ ಸೆಳೆದಾವೆ
||ಭಾವಾ ಬಿರಿದು, ಹತ್ತಿರ ಕರೆದು ||
ಮಾವು ಬೇವು ತಾಳೆ ತೆಂಗು
ಲಾಲಿ ಹಾಡ್ಯಾವೆ
||ತೇರಾ ಏರಿ...||

ಭೇದಭಾವ ಮುಚ್ಚುಮರೆ ಒಂದು ಮಾಡ್ದೇನೆ
ಸೂರ್ಯ ಒಂದೇ ಬೆಳಕ ನಮಗೆ ನೀಡ್ಯಾನೆ
ಗಾಳಿ ನೀರು ಎಲ್ಲ ಕೊಟ್ಟು ಜಗವ ನಡೆಸ್ಯಾನೆ
ಸಿರಿಯ ಹಂಚಿಕೊಂಡರೆ ಬಾಳು ಸವಿಜೇನೆ
||ಪ್ರೀತಿ ಬೆಳೆದೆ ಸ್ನೇಹ ಕಳೆದು||
ನಗುತ ನಗುತ ನಾವು ನೀವು ಸವಿಯುವ ಸುಖವನ್ನೇ

Kudos to the directors and actors..for such awesome films and songs...

No comments: